'Mufti' movie Director Narthan speaks about 'Bairathi Ranagallu' character & reveals a lot of interesting facts about this role. Director speaks about Shiva Rajkumar & about his performance as well. Director Narthan explains, How Bhairathi Ranagallu role got created? What made him to create this type of role & what was the inspiration?
'ಮಫ್ತಿ' ಸಿನಿಮಾ ನೋಡಿದ ಬಹುತೇಕರಿಗೆ ಕಾಡುವ ಪಾತ್ರ 'ಭೈರತಿ ರಣಗಲ್ಲು'. ಆ ಪಾತ್ರಕ್ಕೆ ಇರುವ ತಾಕತ್ತೇ ಬೇರೆ. ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಆ ಪಾತ್ರ ಪ್ರೇಕ್ಷಕರನ್ನು ಕೆಣಕುತ್ತದೆ. ಆ ಪಾತ್ರಕ್ಕಾಗಿ ಮತ್ತೆ ಸಿನಿಮಾ ನೋಡಬೇಕು ಎನ್ನುವ ಬಯಕೆ ಹುಟ್ಟಿಸುತ್ತದೆ. 'ಭೈರತಿ ರಣಗಲ್ಲು' ಪಾತ್ರ ಮಾಡಿದ್ದು ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್. ನೂರಕ್ಕೂ ಹೆಚ್ಚು ಸಿನಿಮಾ ಮಾಡಿರುವ ಶಿವಣ್ಣ 'ಮಫ್ತಿ'ಯಲ್ಲಿ ಮಾಡಿದ ಪಾತ್ರ ತುಂಬ ವಿಭಿನ್ನ ಮತ್ತು ವಿಶೇಷವಾಗಿತ್ತು. 'ಭೈರತಿ ರಣಗಲ್ಲು' ಪಾತ್ರದ ಬಗ್ಗೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಆ ಪಾತ್ರ ಹೇಗೆ ಹುಟ್ಟಿದ್ದು ಹೇಗೆ ಎಂಬ ಕುತೂಹಲಕಾರಿ ವಿಷಯವನ್ನು ಚಿತ್ರದ ನಿರ್ದೇಶಕ ನರ್ತನ್ ಬಿಚ್ಚಿಟ್ಟಿದ್ದಾರೆ.
''ಖುಷಿ ಆಗುತ್ತಿದೆ. ನನ್ನ ಮೊದಲ ಸಿನಿಮಾ ಈ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡಿದ್ದು ತುಂಬ ಖುಷಿ ಆಗುತ್ತಿದೆ. ಈ ಚಿತ್ರವನ್ನು ಒಪ್ಪಿಕೊಂಡ ಜನರಿಗೆ ಮೊದಲು ಧನ್ಯವಾದ ಹೇಳುತ್ತೇನೆ.'' - ನರ್ತನ್, ನಿರ್ದೇಶಕ